Skip to main content

Featured

ಕರ್ನಾಟಕ ಮಳೆ ಮುನ್ಸೂಚನೆ

  ಕರ್ನಾಟಕದಲ್ಲಿ ಪ್ರಸ್ತುತ ಭಾರೀ ಮಳೆಗಾಲ ಪ್ರಾರಂಭವಾಗಿದೆ, ಮತ್ತು ರಾಜ್ಯದಲ್ಲಿ 2024 ಮೇ 22ರ ತನಕ ಸ್ವಲ್ಪಕ್ಕಿಂತ ಹೆಚ್ಚಿನ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇದು ದಕ್ಷಿಣ ಭಾರತದ ದ್ವೀಪ ಪ್ರದೇಶದ ವೈಶಾಲ್ಯಮಾನದ ಹವಾಮಾನ ಮಾದರಿಯ ಭಾಗವಾಗಿದೆ . ನಿರ್ದಿಷ್ಟ ಜಿಲ್ಲೆಗಳಲ್ಲಿ, ಮಿಂಚು ಮತ್ತು ಮಳೆಯಿಂದ ಸಹಿತ ತೀವ್ರ ಗಾಳಿ ಸಂಭವಿಸಬಹುದು, ಮತ್ತು ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಹೆಚ್ಚು ಭಾರೀ ಮಳೆಯಾಗುವ ಸಾಧ್ಯತೆ ಇದೆ ​. ಭಾರತ ಹವಾಮಾನ ಇಲಾಖೆ (IMD) ಕೆಲವು ಪ್ರದೇಶಗಳಲ್ಲಿ ಈ ಅವಧಿಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಬಗ್ಗೆ ಎಚ್ಚರಿಕೆಗಳು ಮತ್ತು ವಿವರವಾದ ಮುನ್ಸೂಚನೆಗಳನ್ನು ನೀಡಿದೆ

ATM ನಲ್ಲಿ ನೋಟು ಬರದಿದ್ರೆ ಏನು ಮಾಡಬೇಕು?

ಹಣ ಡ್ರಾ ಮಾಡಲು ಸಾಮಾನ್ಯವಾಗಿ ಎಲ್ಲರೂ ಸಹ ATM ಬಳಸ್ತಾರೆ. ಬೇರೆ ಬ್ಯಾಂಕ್ ATMನಿಂದ ಹಣ ಡ್ರಾ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ. ಹೀಗೆ ಮಾಡುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ. ಮಾನಸಿಕ ಹಾಗೂ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಬೇರೆ ಬ್ಯಾಂಕ್ ಗೆ ಹೋದಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಬೇರೆ ಬ್ಯಾಂಕ್ ಗೆ ಹೋದಾಗ ನೀವು ಈ ಕೆಲಸವನ್ನು ಅವಶ್ಯವಾಗಿ ಮಾಡಬೇಕಾಗುತ್ತದೆ. ಹಣ ಡ್ರಾ ಮಾಡಿದ ನಂತರ ಬರುವ ಸ್ಲಿಪ್ ನನ್ನ ಜೋಪಾನವಾಗಿ ತೆಗೆದಿಟ್ಟುಕೊಂಡಿರಬೇಕಾಗುತ್ತದೆ.
ಕೆಲವೊಮ್ಮೆ ಹಣ ಡ್ರಾ ಮಾಡಿದ್ದು ಸ್ಲಿಪ್ ನಲ್ಲಿ ಬರುತ್ತದೆ. ಆದ್ರೆ ಎಟಿಎಂನಿಂದ ಹಣ ಬರುವುದಿಲ್ಲ. ಆಗ ಬ್ಯಾಂಕ್ ಗೆ ಸಾಕ್ಷಿ ತೋರಿಸಲು ಇದು ಬೇಕಾಗುತ್ತದೆ. ಇನ್ನು ಬೇರೆ ಎಟಿಎಂನಲ್ಲಿ ವ್ಯವಹಾರ ಮಾಡುವಾಗ.ಕೆಲವೊಮ್ಮೆ ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ಆಗ ನೀವು ಪೊಲೀಸರಿಗೆ ದೂರು ನೀಡಬೇಕಾಗುತ್ತೆ. ನೀವು ಯಾವ ಬ್ಯಾಂಕ್ ಎಟಿಎಂ ಬಳಸಿದ್ದೀರಿ? ನಿಮ್ಮ ಅಕೌಂಟ್ ಯಾವ ಬ್ಯಾಂಕ್ ನಲ್ಲಿ ಇದೆ? ನೀವು ಬಳಸಿದ ಎಟಿಎಂ ಶಾಖೆ ಯಾವುದು ಎಂಬುದರ ವಿವರವನ್ನ ಪೊಲೀಸರಿಗೆ ನೀಡಬೇಕಾಗುತ್ತೆ. ಇನ್ನು ಬೇರೆ ಬ್ಯಾಂಕ್ ಎಟಿಎಂನಿಂದ ನಕಲಿ ನೋಟುಗಳು ಸಿಕ್ಕರೆ ತಕ್ಷಣ ಹತ್ತಿರವಿರುವ ಆ ಬ್ಯಾಂಕಿನ ಶಾಖೆಗೆ ಹೋಗಿ.ಅಲ್ಲಿ ಅಲ್ಲಿ ಸಿಕ್ಕ ನಕಲಿ ನೋಟನ್ನ ಬದಲಾಯಿಸಿಕೊಳ್ಳಿ. ಪ್ರತಿಯೊಂದು ಬ್ಯಾಂಕ್ ಕೂಡ ನೋಟನ್ನ ಬದಲಾಯಿಸಿ ನೀಡುತ್ತದೆ

Comments